ಅಯೋಧ್ಯೆ
ಭಾರತದ ಉತ್ತರ ಪ್ರದೇಶದ ಫೈeóÁಬಾದ್ ಜಿಲ್ಲೆಯಲ್ಲಿರುವ ಔಧ್ ಪಟ್ಟಣವೇ ಪ್ರಾಚೀನ ಅಯೋಧ್ಯೆ. ಘಾಗ್ರಾನದಿಯ (ಸರಯೂ) ದಂಡೆಯಮೇಲೆ ಫೈeóÁಬಾದ್ ಪಟ್ಟಣಕ್ಕೆ ಅನತಿ ದೂರದಲ್ಲಿದೆ. ಪೌರಾಣಿಕವಾಗಿ ಮತ್ತು ಐತಿಹಾಸಿಕವಾಗಿ ಬಹು ಪ್ರಸಿದ್ಧವಾಗಿದೆ. ಮನು ಇದನ್ನು ಸ್ಥಾಪಿಸಿದನೆಂದು ಪ್ರತೀತಿ. ಹಿಂದೂಗಳ ಮೋಕ್ಷಪ್ರದವಾದ ಏಳು ನಗರಗಳಲ್ಲಿ ಒಂದು. ಇಕ್ಷ್ವಾಕು ವಂಶದ ಅರಸರ ರಾಜಧಾನಿ. ರಾಮಾಯಣ ಕಾಲದಲ್ಲಿ ದಶರಥನ ರಾಜಧಾನಿಯಾಗಿತ್ತು. ಶ್ರೀ ರಾಮನ ಅವತಾರವಾದುದು ಇಲ್ಲಿಯೇ. ರಾಮಾಯಣದಲ್ಲಿ ಈ ನಗರದ ಬಹುಮುಖ ವರ್ಣನೆಯಿದ್ದು ಅಯೋಧ್ಯೆ ಮಹಾತ್ಮೆ ಎಂಬ ಕಾವ್ಯವೂ ಇದೆ. ಮಹಾಭಾರತದ ಕಾಲದಲ್ಲಿ ಬೃಹದ್ರಥ ಅಯೋಧ್ಯೆಯಿಂದ ಕೋಸಲ ಸೇನೆಯನ್ನು ಕುರುಕ್ಷೇತ್ರಕ್ಕೆ ಕೊಂಡೊಯ್ದನೆಂದು ತಿಳಿದುಬರುತ್ತದೆ. ವೃಷಭ, ಅಜಿತ ಮೊದಲಾದ ತೀರ್ಥಂಕರರ ಜನ್ಮಸ್ಥಳವಾದ್ದರಿಂದ ಇದು ಜೈನರಿಗೂ ಪವಿತ್ರ ಕ್ಷೇತ್ರ. (640)ರಲ್ಲಿ ಹೂಯೆನ್‍ತ್ಸಾಂಗ್ ಅಯೋಧ್ಯೆಗೆ ಬಂದಾಗ ಅಲ್ಲಿ (20) ಬೌದ್ಧಸ್ತೂಪಗಳೂ (3000) ಭಿಕ್ಷುಗಳೂ ಇದ್ದುದಾಗಿ ವರದಿಮಾಡಿದ್ದಾನೆ. ಶ್ರೀರಾಮನಿಗೆ ಸಂಬಂಧಿಸಿದಂತೆ ಅನೇಕ ದೇವಾಲಯಗಳಿವೆ. ಅವುಗಳಲ್ಲಿ ಇಂದ್ರನೀಲಮಣಿಯಿಂದ ಮಾಡಲ್ಪಟ್ಟ ಹನುಮಂತನ ವಿಗ್ರಹವಿರುವ ದೇವಾಲಯ ಬಹು ಸುಂದರವಾಗಿದೆ.			     					     
(ಎ.ಕೆ.; ಎನ್.ಎನ್.ಕೆ.; ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ